Wednesday, April 23, 2008

Kaala chakra -- Inspired by first rains of the season

Bisilige bhumi biriyalu
Chinteyali mana soragalu
Dahake bhayi vanagalu
Pariharake mana marugalu
Besigeya dinagalu
Manssige besarada dinagalu

Akashadi moda kaviyalu
Manadi hosa kanasondu moodalu
Hani hani dharege iliyalu
Nansagisuva hadiyali mana nedeyalu
Malegalada dinagalu
Manassige manollasada dinagalu

Matthomme baruvudu besigeyu
Matthomme manavu soraguvudu
Matthomme baruvudu malegalavu
Matthomme manavu kanasa kanuvudu
Kala chakra urulalu
Manasige taruvudu anubhavagalu

Besigeyali bhoomi yeste vanagidaru
Novali mana yeste balalidaru
Kayda male saaku bhoomi tannagagisalu
Kanda kanasu saaku mana chetarisalu
Novinalu nalivinalu
Alukade saguvude jeevanavu
Alukade saguvude jeevanavu

-- Kavitha

1 comment:

  1. Finally posting in kannada
    ಕಾಲ ಚಕ್ರ

    ಬಿಸಿಲಿಗೆ ಭೂಮಿ ಬಿರಿಯಲು
    ಚಿಂತೆಯಲಿ ಮನ ಸೊರಗಳು
    ದಾಹಕೆ ಭಾಯಿ ವಣಗಳು
    ಪರಿಹಾರಕೆ ಮನ ಮರುಗಳು
    ಬೇಸಿಗೆಯ ದಿನಗಳು
    ಮನಸ್ಸಿಗೆ ಬೇಸರದ ದಿನಗಳು

    ಆಕಾಶದಿ ಮೋಡ ಕವಿಯಲು
    ಮನದಿ ಹೊಸ ಕನಸೊಂದು ಮೂಡಲು
    ಹನಿ ಹನಿ ಧರೆಗೆ ಇಳಿಯಲು
    ನನಸಾಗಿಸುವ ಹಾದಿಯಲಿ ಮನ ನೆಡೆಯಲು
    ಮಳೆಗಾಲದ ದಿನಗಳು
    ಮನಸ್ಸಿಗೆ ಮನೋಲ್ಲಾಸದ ದಿನಗಳು

    ಮತ್ತೊಮ್ಮೆ ಬರುವುದು ಬೇಸಿಗೆಯು
    ಮತ್ತೊಮ್ಮೆ ಮನವು ಸೊರಗುವುದು
    ಮತ್ತೊಮ್ಮೆ ಬರುವುದು ಮಳೆಗಾಲವು
    ಮತ್ತೊಮ್ಮೆ ಮನವು ಕನಸ ಕಾಣುವುದು
    ಕಾಲ ಚಕ್ರ ಉರುಳಲು
    ಮನಸ್ಸಿಗೆ ತರುವುದು ಅನುಭವಗಳು

    ಬೇಸಿಗೆಯಲ್ಲಿ ಭೂಮಿ ಎಷ್ಟೇ ವಣಗಿದರು
    ನೋವಲ್ಲಿ ಮನ ಎಷ್ಟೇ ಬಳಲಿದರು
    ಕಾಯ್ದ ಮಳೆ ಸಾಕು ಭೂಮಿ ತಣ್ಣಗಾಗಿಸಲು
    ಕಂಡ ಕನಸು ಸಾಕು ಮನ ಚೇತರಿಸಲು
    ನೋವಿನಲು ನಲಿವಿನಲು
    ಅಳುಕದೆ ಸಾಗುವುದೇ ಜೀವನವು
    ಅಳುಕದೆ ಸಾಗುವುದೇ ಜೀವನವು

    ರಚನೆ - ಕವಿತಾ ಬಿ ಕೆ
    2006

    ReplyDelete